ಯಾಕೋಬೀ, ಹರ್ಮನ್ ಜಾರ್ಜ್	
1850-1937.  ಜರ್ಮನ್ ಮೂಲದ ಭಾಷಾಶಾಸ್ತ್ರಜ್ಞ ಮತ್ತು ಭಾರತಶಾಸ್ತ್ರಜ್ಞ. ಈತನ ಪ್ರಕಟಣೆಗಳಲ್ಲಿ ಮತ್ತೊಬ್ಬ ಜರ್ಮನ್ ಭಾಷಾಶಾಸ್ತ್ರಜ್ಞ ಮತ್ತು ಸಂಸ್ಕøತ ಭಾಷಾವಿಶಾರದ ಮ್ಯಾಕ್ಸ್ ಮುಲ್ಲರ್ ಸಂಪಾದಿತ ಪೌರ್ವಾತ್ಯ ಪವಿತ್ರ ಗ್ರಂಥಗಳು ಎಂಬ ಮಾಲಿಕೆಯ 22 ಮತ್ತು 45ನೆಯ ಸಂಪುಟಗಳು ಗಮನಾರ್ಹವಾದವು. ಈ ಸಂಪುಟಗಳಲ್ಲಿ ಸಂಸ್ಕøತ ಸಾಹಿತ್ಯ ಮತ್ತು ಅದರ ಕೆಲವು ಭಾಷಾಂತರಗಳನ್ನು ಸಂಪಾದಿಸಿದ್ದಾರೆ. ಇವುಗಳಲ್ಲದೆ ಭಾರತೀಯ ಕಾಲಗಣನಾಶಾಸ್ತ್ರ, ತೌಲನಿಕ ಭಾಷಾಶಾಸ್ತ್ರ, ಪ್ರಾಕೃತ ವ್ಯಾಕರಣ ಸಾಹಿತ್ಯ, ಕಾವ್ಯತತ್ತ್ವಶಾಸ್ತ್ರ, ಜ್ಯೋತಿಶಾಸ್ತ್ರ ಮತ್ತು ಜೈನಧರ್ಮಕ್ಕೆ ಸಂಬಂಧಿಸಿದಂತೆ ಬಹಳಷ್ಟು ಕೆಲಸಮಾಡಿದ್ದಾನೆ.

ಪ್ರಮುಖವಾಗಿ ಜೈನ ಸಾಹಿತ್ಯ ಭಂಡಾರದ ಪರಿಚಯವನ್ನು ಪಾಶ್ಚಾತ್ಯರಿಗೆ ಮಾಡಿಕೊಟ್ಟವನು ಈತ. 1895ರಲ್ಲಿ ಉತ್ತರಾಧ್ಯಯನ ಸೂತ್ರ ಮತ್ತು ಸೂತ್ರ ಕೃತಾಂಗ ಎಂಬ ಎರಡು ಜೈನಗ್ರಂಥಗಳನ್ನು ಪ್ರಕಟಿಸಿದ. ಪಾಶ್ಚಾತ್ಯ ಮೂಲದ ಭಾರತಶಾಸ್ತ್ರಜ್ಞರಿಗೆ ಜೈನ ಮತ್ತು ಬೌದ್ಧ ಪಂಥಗಳ ಪ್ರತ್ಯೇಕ ಉಗಮವನ್ನು ಪರಿಚಯಮಾಡಿಕೊಟ್ಟ. ಭಾರತೀಯ ಅಲಂಕಾರಶಾಸ್ತ್ರದ ವಿವಿಧ ಅಂಗಗಳನ್ನು ಕೂಲಂಕಷವಾಗಿ ಅಭ್ಯಸಿಸಿದ್ದ. ಜ್ಯೋತಿಶ್ಯಾಸ್ತ್ರದ ಅಭ್ಯಾಸವನ್ನು ಮಾಡಿ ತನ್ಮೂಲಕ ವೇದ ನಿರ್ಮಿತಿಯ ಕಾಲ ಕ್ರಿಪೂ 5,000 ವರ್ಷಗಳೆಂದು ಸಿದ್ಧಮಾಡಿದ ಹಸ್ತಪ್ರತಿಗಳ ಸಂಗ್ರಹಕ್ಕಾಗಿ ಇವನು ಭಾರತಕ್ಕೆ 1913-14ರಲ್ಲಿ ಬಂದಿದ.
(ಬಿ.ಆರ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ